II PUC Result 2019 of Poornaprajna P.U.College, Admar


ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ *ಪೂರ್ಣ ಪ್ರಜ್ಞ ಪ.ಪೂ. ಕಾಲೇಜು ಅದಮಾರು* ಈ ಬಾರಿಯೂ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಯನ್ನು ಮುಂದುವರಿಸಿದೆ. ಗ್ರಾಮೀಣ ಪ್ರದೇಶದಲ್ಲಿದ್ದರೂ ಸ್ಪರ್ಧಾತ್ಮಕ ಜಗತ್ತಿಗೆ ಅನುವಾಗುವಂತೆ ಸುಸಂಸ್ಕೃತ, ಶಿಸ್ತಿನ ವಿದ್ಯಾರ್ಥಿಗಳನ್ನು ರೂಪಿಸಿ ಪೂಜ್ಯ ಸ್ವಾಮೀಜಿಯವರ ಆಶೀರ್ವಾದ ದೊಂದಿಗೆ, ಗೌರವ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ, ಪ್ರಾಂಶುಪಾಲರ ಹಾಗೂ ಉಪನ್ಯಾಸಕ ವೃಂದದವರ ಪರಿಶ್ರಮದಿಂದ ಈ ಬಾರಿಯೂ ರಾಜ್ಯ ಮಟ್ಟದಲ್ಲಿ ಏಳನೇ ಮತ್ತು ಹತ್ತನೇ ಸ್ಥಾನ ವನ್ನು ಇಬ್ಬರು ವಿದ್ಯಾರ್ಥಿಗಳು ಗಳಿಸಿದ್ದಾರೆ ಎನ್ನಲು ತುಂಬಾ ಹೆಮ್ಮೆ ಎನಿಸುತ್ತದೆ. ಪರೀಕ್ಷೆಗೆ ಹಾಜರಾದ 261 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ,152 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ , 30 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲೂ ಉತ್ತೀರ್ಣರಗಿರುತ್ತಾರೆ. ಈ ಬಾರಿ ಸಂಸ್ಥೆಯು 93.86% ಫಲಿತಾಂಶವನ್ನು ಪಡೆದಿದೆ.

ವಿಜ್ಞಾನ ವಿಭಾಗದಲ್ಲಿ

*ವೈಷ್ಣವಿ ವೈ. 98%,(588) ( ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ*).

*ಶಿಶಿರ್ ಭಟ್ 97.53% (585 )( ರಾಜ್ಯ ಮಟ್ಟದಲ್ಲಿ ಹತ್ತನೇ ಸ್ಥಾನ)*

ಅಭಿಜ್ಞಾ ನಾಯಕ್ 96.16%(577).

ಕಾಮರ್ಸ್ ವಿಭಾಗದಲ್ಲಿ

ಹೀನಾ ಕೌಸರ್ 574,

ಸಮ್ರಿನ್ ಭಾನು 569 ,

ಸಿತಾರ 561.

ಕಲಾ ವಿಭಾಗದಲ್ಲಿ

ಹರ್ಷೀತ ರಾವ್ 522.

ಪ್ರಿಯಾಂಕ 517. ಮತ್ತು

ಪ್ರಿಯಾ 454 ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳನ್ನು ಪಡೆದಿರುತ್ತಾರೆ.
ಪಾಠ ದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅದಮಾರು ಪೂರ್ಣ ಪ್ರಜ್ಞ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ರಾಜ್ಯದ ವಿವಿಧ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿ ಹಾಸ್ಟೆಲ್ ನಲ್ಲಿದ್ದು ಅಭ್ಯಾಸ ಮಾಡುತ್ತಿದ್ದಾರೆ. ಈ ಭರತ ಭೂಮಿಗೆ ಭಾರತೀಯ ಸಂಸ್ಕೃತಿಯ ಶಿಸ್ತಿನ ವಿದ್ಯಾರ್ಥಿ ವೃಂದವನ್ನು ರೂಪಿಸುತ್ತಿರುವ ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗೆ ನನ್ನ ನಮನಗಳು.🙏🏻🙏🏻